Mahendra A C

Mahendra A C

Assistant Professor.

ಅಪಾರ ಅನುಭವವನ್ನು ಪಡೆದ ಗುರು ವೃಂದದವರ ಪಾಠ ಪ್ರವಚನವನ್ನು ಕೇಳುವುದಕ್ಕೂ ಗೋಸ್ಕರವಾಗಿಯೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನನ್ನ
ಬಿ. ಎ ಪದವಿ ಮುಗಿಸಿದ ನಂತರ ಶಂಕರಗೌಡ ಬಿ ಎಡ್ ಕಾಲೇಜಿಗೆ ಪ್ರವೇಶವನ್ನು ಪಡದೆ.ಇದೊಂದೇ ಅಂಶ ಈ ಕಾಲೇಜಿನ ಪ್ರಖ್ಯಾತಿ ಮತ್ತು ಪ್ರಾಮುಖ್ಯತೆಯನ್ನು ತಿಳಿಸುತ್ತದೆ ಎಂಬುದು ನನ್ನ ಭಾವನೆ.

ನನ್ನ ವ್ಯಕ್ತಿತ್ವ ಮತ್ತು ವೃತ್ತಿ ಬದುಕಿನ ರೂಪಣೆಯಲ್ಲಿ ಅಪಾರ ಪ್ರಭಾವ ಬೀರಿರುವ ಎಲ್ಲ ಗುರುವೃಂದಕ್ಕೆ ವಿಶೇಷವಾಗಿ ಮಾತೃ ಸಮಾನರಾದ ಡಾ.ವಿ. ಡಿ ಸುವರ್ಣ ಮೇಡಂ ರವರಿಗೆ ಹಾಗೂ ಡಾ. ವಿ. ಕೆ ಕೃಷ್ಣಪ್ಪ ಸರ್ ಅವರಿಗೆ ಅನಂತ ಧನ್ಯವಾದಗಳು .

ಇಲ್ಲಿನ ಸುಸಜ್ಜಿತ ಮೂಲಭೂತ ಸೌಕರ್ಯ ಹಾಗೂ ಗುರುಗಳ ಸರ್ವಾಧಿಕಾರ ರಹಿತ ನಡೆ ಮತ್ತು ರಚನಾತ್ಮಕ ಬೋಧನೆ ನನಗೆ ಅತ್ಯಂತ ಪ್ರಿಯವಾದ ಅಂಶಗಳು.
ನನ್ನಂತಹ ಸಾವಿರಾರು ಜನರ ಭವಿಷ್ಯ ರೂಪಿಸಿದ ಈ ಗುರುಕುಲ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲಿ ಎಂಬುದೇ ನನ್ನ ಆಶಯ .